ಬೆಂಗಳೂರು: ‘ಬಸವಣ್ಣ ಅವರ ಪರಿಕಲ್ಪನೆಯಂತೆ ಎಲ್ಲರನ್ನೂ ಒಳಗೊಂಡು ಸದನವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವೆ. ಕರ್ನಾಟಕದ ಜಾತ್ಯತೀತ ಪರಂಪರೆಯಂತೆ ನಡೆಯುವೆ’ ಎಂದು ವಿಧಾನಸಭೆಯ ನೂತನ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಸಭಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಅವರು, ‘ಆಡಳಿತ ಮತ್ತು ವಿರೋಧ ಪಕ್ಷಗಳು ಒಟ್ಟಿಗೆ ಸಾಗಿದರೆ ಮಾತ್ರ ಕರ್ನಾಟಕದ ಅಭಿವೃದ್ಧಿ ಸಾಧ್ಯ. ಸುಗಮ ಕಲಾಪ ನಿರ್ವಹಣೆಗೆ ತಂತ್ರಜ್ಞಾನದ ಸುದುಪಯೋಗ ಪಡೆಯುವೆ’ ಎಂದರ...